ದಿನೇಶ ಉಪ್ಪೂರ:
*ನನ್ನೊಳಗೆ - 80*
ನಮ್ನ ಊರಿನಲ್ಲಿ "ಪ್ರೀತಿ ಕ್ಲಿನಿಕ್" ಅಂತ ಒಂದು ಡಾಕ್ಟರ್ ಮನೆ ಇದೆ. ಅಂದರೆ, ಡಾಕ್ಟರ್ ರ ಮನೆಯೇ. ಮನೆಯ ಮುಂಬಾಗದ ಒಂದು ಕೋಣೆಯಲ್ಲಿಯೇ ಆ ಡಾಕ್ಟರ್ ರ ಶಾಪ್.
ಎದುರಿಗೇ ಒಂದು ಬೋರ್ಡು. ಬೆಳಿಗ್ಗೆ ಏಳರಿಂದ ರಾತ್ರಿ ಹತ್ತರವರೆಗೂ ಡಾಕ್ಟರ್ ವಿಸಿಟಿಂಗ್ ಸಮಯ ಅಂತ ಅದರಲ್ಲಿತ್ತು. ಅದರ ಪಕ್ಕದಲ್ಲಿ ಒಂದು ಕಾಲಿಂಗ್ ಬೆಲ್. ಅದರ ಕೆಳಗೆ "ಒಮ್ಮೆ ಮಾತ್ರ ಒತ್ತಿ" ಅಂತ ಸೂಚನೆಯ ಬರಹ. ಸಂದರ್ಶಕರು ಇಲ್ಲದಿದ್ದಾಗ, ಡಾಕ್ಟರ್ ಯಾವಾಗಲೂ ಮನೆಯ ಒಳಗೋ ಹಿಂದಿನ ತೋಟದಲ್ಲೋ ಕೆಲಸ ಮಾಡುತ್ತಾ ಇರುತ್ತಾರೆ. ಒಮ್ಮೆ ಬೆಲ್ಲು ಮಾಡಿದರೆ ಸಾಕು. ಕೇಳಲಿಲ್ಲವೇನೋ ಎಂದು ಪದೇ ಪದೇ ಬೆಲ್ಲು ಮಾಡಬೇಡಿ ಎಂಬ ಸೂಚನೆ ಅದು ಎಂದು ಅಂದಾಜು.
ಆ ಡಾಕ್ಟರ್ ರ ಒಂದು ವಿಶೇಷ ಅಂದರೆ, ನೀವು ಏನೇ ಕಾಯಿಲೆ ಆಂತ ಹೋದರೂ ಎರಡು ದಿನಕ್ಕೆ ಮಾತ್ರ ಮಾತ್ರೆಯೋ, ಔಷದಿಯನ್ನೋ ಕೊಟ್ಟು, ಇಪ್ಪತ್ತು ರುಪಾಯಿ ಮಾತ್ರ ಫೀಸು ತೆಗೆದು ಕೊಳ್ಳುತ್ತಿದ್ದರು. ಕಾಯಿಲೆ ಗುಣ ಆಗದಿದ್ದರೆ ಮತ್ತೆ ಹೋಗಬೇಕು. ಆಗ ಫೀಸು ಮತ್ತೆ ಇಪ್ಪತ್ತು ರೂಪಾಯಿ.
ಒಮ್ಮೆ ಜ್ವರವೋ, ಶೀತವೋ ಏನೋ ಆಗಿ ಮನೆಯಲ್ಲಿ ಅದು ಇದು ಮದ್ದು ಮಾಡಿ ಉಪಯೋಗ ಇಲ್ಲ ಎಂದು ತೀರ್ಮಾನವಾಗಿ ಅವರಲ್ಲಿಗೆ ಹೋಗಿದ್ದೆ. ಎಂದಿನಂತೆ ಅವರು ಬಾಗಿಲು ಹಾಕಿ ಮನೆಯ ಹಿಂದೆ ಎಲ್ಲೋ ಇದ್ದರು. ನಾನು ಸ್ವಲ್ಪ ಹೊತ್ತು ಕುಳಿತೆ. ಅವರು ಬರಲಿಲ್ಲ. ಬೆಲ್ಲು ಒತ್ತಿದೆ. ಕಾದೆ. ಅವರು ಬಾರದೇ ಇರುವುದರಿಂದ ಬೆಲ್ಲು ಮಾಡಿದ್ದು ಕೇಳಿಸಲಿಲ್ಲವೋ ಏನೋ ಎಂದು ಮತ್ತೊಮ್ಮೆ ಬೆಲ್ಲು ಮಾಡಿದೆ. ಆ ಕೂಡಲೇ ಆ ಡಾಕ್ಟರ್ ಬಂದು ದಡಕ್ಕನೇ ಬಾಗಿಲು ತೆರೆದು, ನಿಮಗೆ ಓದಲಿಕ್ಕೆ ಬರುವುದಿಲ್ಲವೇ? ಎಂದರು. ನನಗೆ ಏನು ಅಂತ ಅರ್ಥ ಆಗಲಿಲ್ಲ. ಆಗ ಅವರೇ "ನಮ್ಮಲ್ಲಿ ಒಮ್ಮೆ ಬೆಲ್ಲು ಮಾಡುವವರು ಉತ್ತಮರು, ಎರಡು ಸಲ ಬೆಲ್ಲು ಮಾಡುವವರು ಮಧ್ಯಮರು" ಅಂದರು. ನನಗೆ ಆಗ ಅರ್ಥವಾಯಿತು. ಸದ್ಯ ನಾನು ಅಧಮನಾಗಲಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡೆ.
ಆದರೆ ಅದು ಅಷ್ಟು ದೊಡ್ಡ ಅಪರಾಧ ಅನ್ನಿಸಲೇ ಇಲ್ಲ ನನಗೆ. ಸುಮ್ಮನೇ ನಗೆಯಾಡಿದೆ. ಆದರೆ ಅವರು ಅಷ್ಟು ಸೀರಿಯಸ್ಸಾಗಿ ಹೇಳಿದ್ದಕ್ಕೆ ಏನಾದರೂ ಹೇಳಲೇ ಬೇಕು ಅಂತ ನನಗೆ ಅನ್ನಿಸಿತು. ನನಗೆ ಆ ಡಾಕ್ಟರ್ ಒಬ್ಬರೇ ಅಲ್ಲ. ಅವರಿಗೂ ನಾನೊಬ್ಬನೇ ಪೇಶಂಟ್ ಅಲ್ಲದಿದ್ದರೂ ನನ್ನಿಂದ ಸಿಗುವ ಫೀಸು ಸಿಗದಿದ್ದರೆ ಅವರಿಗೆ ನಷ್ಟ ಎಂದು ಲೆಕ್ಕಾಚಾರ ನನ್ನದು. ಅವರು ಡಿಗ್ರಿ ಪಡೆದಿರುವುದರಿಂದ ಕಲಿತು ಬಂದಿರುವುದರಿಂದ ಜನರಿಗೆ ಮದ್ದು ಕೊಟ್ಟು ದುಡ್ಡು ಪಡೆಯುತ್ತಾರೆ. ಅಂದರೆ ಅದು ಒಂದು ತರಹದ ವ್ಯಾಪಾರ. ಆದರೆ ಎಲ್ಲ ಡಾಕ್ಟರ್ ರು ಹಾಗೆ ಅಂತ ಹೇಳುವುದಲ್ಲ. ನಾನು ಅವರಿಂದ ಮಾತ್ರೆ ಪಡೆದು ದುಡ್ಡು ಕೊಡುವಾಗ ಹೇಳಿದೆ. "ಆ ಹೆಚ್ಚುವರಿ ಬೆಲ್ಲು ಮಾಡಿದ್ದರಿಂದ ನಿಮಗೆ ಹರ್ಟ್ ಆಗಿದ್ದರೆ, ಅಥವ ಏನಾದರೂ ನಷ್ಟ ಆಗಿದ್ದರೆ, ಅದನ್ನು ನಿಮ್ಮ ಫೀಸಿನಲ್ಲಿ ಮುರಿದುಕೊಳ್ಳಿ" ಅಂತ. ಅವರು ಮಾತಾಡಲಿಲ್ಲ.
ಮತ್ತೊಮ್ಮೆ ಅವರಲ್ಲಿ ಹೋದಾಗ ನನ್ನ ಕೋರಿಕೆಯಂತೆ, ನನ್ನ ಬಿಪಿ ಟೆಸ್ಟ್ ಮಾಡಿದರು. "ನಿಮಗೆ ಸ್ವಲ್ಪ ಬಿಪಿ ಇದೆ. ಹೆಚ್ಚಾಗದಿರಲಿ ಅಂತ ಈಗಿನಿಂದಲೇ ಒಂದು ಕಡಿಮೆ ಪವರ್ ನ ಮಾತ್ರೆ ಕೊಡುತ್ತೇನೆ. ತೆಗೆದುಕೊಳ್ಳಿ" ಅಂದರು. ಅವರು ಕೊಟ್ಟ ಮಾತ್ರೆಯನ್ನು ಒಂದು ವಾರ ತೆಗೆದುಕೊಂಡೆ. ಮತ್ತೆ ಅವರೇ ಹೇಳಿದಂತೆ ಅದೇ ಹೆಸರಿನ ಮಾತ್ರೆಯನ್ನು ಡ್ರಗ್ ಶಾಪಿನಿಂದ ಪಡೆದು ಮುಂದುವರಿಸಬೇಕಿತ್ತು. ಆದರೆ ನನ್ನ ಮನಸ್ಸಿನಲ್ಲಿ ನನಗೆ ಬಿಪಿ ಇರಲಿಕ್ಕಿಲ್ಲ ಅಂತ ಇತ್ತು. ನಾನು ಮುಂದಿನ ಸಲದಿಂದ ಅದರಲ್ಲಿ ಅರ್ಧ ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳತೊಡಗಿದೆ. ಮತ್ತೆ ಎರಡು ಮೂರು ದಿನ ನಿಲ್ಲಿಸಿದೆ. ನಂತರ ಅವರ ಹತ್ತಿರ ಹೋದೆ. "ಸರ್, ನಾನು ನೀವು ಕೊಟ್ಟ ಮಾತ್ರೆಯನ್ನು ಕಡಿಮೆ ಕಡಿಮೆ ಮಾಡಿ ನಿಲ್ಲಿಸಿದೆ. ಈಗ ಸ್ವಲ್ಪ ಟೆಸ್ಟ್ ಮಾಡಬಹುದೇ?" ಅಂತ ಕೇಳಿದೆ.
ಅವರು ಒಮ್ಮೆಲೇ ಸಿಟ್ಟಾಗಿ, "ಒಹೋ ನೀವೇ ತೀರ್ಮಾನ ತೆಗೆದುಕೊಂಡದ್ದಾ? ಮಾತ್ರೆ ತೆಗೆದುಕೊಳ್ಳುತ್ತಾ ಇದ್ದರೆ ಮಾತ್ರೆ ಬಿಪಿ ನಾರ್ಮಲ್ ಇರುವುದು" ಎಂದು ಬುಸುಗುಟ್ಟಿ ಹೇಳಿ ನನ್ನ ಕೈ ಹಿಡಿದು ತೋಳಿಗೆ ಪಟ್ಟಿ ಸುತ್ತಿ ಟೆಸ್ಟ್ ಮಾಡಿದರು. "ಹೋ, ಈಗ ನೋಡಿ ನೂರ ಎಪ್ಪತ್ತಕ್ಕೆ ಹೋಗಿದೆ. ನೀವು ನೆಗ್ಲೆಟ್ ಮಾಡಿದಿರಿ"ಎಂದು ಮತ್ತೊಂದು ಮಾತ್ರೆಯನ್ನು ಬರೆದುಕೊಟ್ಟು, ಅಂಗಡಿಯಲ್ಲಿ ತೆಗೆದುಕೊಳ್ಳಿ ಅಂದರು. ಆಯಿತು ಎಂದು ಫೀಸು ಕೊಟ್ಟು ಬಂದ ನನಗೆ, ಒಮ್ಮೆ ದಿಗಿಲಾದರೂ ಸ್ವಲ್ಪ ಹೊತ್ತಿನಲ್ಲಿ ನೋಡುವ ಒಮ್ಮೆ ಬೇರೆ ಡಾಕ್ಟರ್ ರಿಗೆ ತೋರಿಸುವ ಎಂದು ಪರಿಚಿತರಾದ ಆಯುರ್ವೇದ ಡಾಕ್ಟರ್ ಒಬ್ಬರ ಹತ್ತಿರ ಹೋಗಿ ತೋರಿಸಿದೆ. ಹಿಂದಿನ ಕತೆಯನ್ನು ಹೇಳದೇ "ಸರ್, ಒಮ್ಮೆ ನನ್ನ ಬಿಪಿ ಚೆಕ್ ಮಾಡುತ್ತೀರಾ?" ಎಂದೆ.
ಅವರು ಟೆಸ್ಟ್ ಮಾಡಿ "ಬಾರ್ಡರ್ ಲ್ಲಿ ಇದೆ. ಆದರೆ ಮಾತ್ರೆ ಗೀತ್ರೆ ಏನೂ ಬೇಡ. ಪುಡ್ ಕಂಟ್ರೋಲ್ ಮಾಡಿ, ಉಪ್ಪು ಕಡಿಮೆ ಮಾಡಿ ಮೂರು ತಿಂಗಳು ಬಿಟ್ಟು ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ" ಎಂದರು. ಮತ್ತೊಮ್ಮೆ ನಾಲ್ಕು ತಿಂಗಳ ನಂತರ ಮತ್ತೊಮ್ಮೆ ಟೆಸ್ಟ್ ಮಾಡಿದಾಗ ಬಿಪಿ ನಾರ್ಮಲ್ ಅಂತಲೇ ಆಯಿತು. ಆದ್ದರಿಂದ ಈಗ ನನಗೆ ಬಿಪಿ ಇಲ್ಲ ಎಂದು ನನಗೇ ಗ್ಯಾರಂಟಿಯಾಗಿದೆ. ಮತ್ತು ಅದು ಆ ಕ್ಲಿನಿಕ್ ನ ಡಾಕ್ಟರ್ ರಿಗೇ ಇದೆ ಎಂದು ತೀರ್ಮಾನಕ್ಕೆ ಬಂದಿದ್ದೇನೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ