ದಿನೇಶ ಉಪ್ಪೂರ:
*ನನ್ನೊಳಗೆ-_ 83*
ನಮ್ಮ ಮನೆಯಿಂದ ಉತ್ತರದ ಬೈಲು ಗದ್ದೆಯಲ್ಲಿಯೇ ಸ್ವಲ್ಪ ಮುಂದೆ ಹೋದರೆ ಮುದೂರಿಯ ಹತ್ತಿರ ತೋಡಿನ ದಂಡೆಯ ಆ ಬದಿಯ ಎತ್ತರದ ಜಾಗದ ಗುಡ್ಡೆಯಲ್ಲಿ ಪುರುಷ ನಾಯ್ಕ ಅಂತ ಒಬ್ಬ ಕುಡುಬಿಯ ಮನೆ ಇತ್ತು. ಮನೆ ಅಂದರೆ ಎಂತದ್ದು. ಒಂದು ಗುಡಿಸಲು. ಮೇಲೆ ಅಡಿಕೆ ಯ ಸೋಗೆಯ ಹೊದಿಕೆ, ತೆಂಗಿನ ಮಡಲಿನ ದಿಡಕಿಯ ಗೋಡೆ. ಮನೆಗೆ ಬಾಗಿಲೂ ಅದರದ್ದೆ. ಆ ಪುರುಷನಿಗೆ ಮೂರೋ ನಾಲ್ಕೋ ಗಂಡು ಮಕ್ಕಳು. ಹಿರಿಯವನು ಬೆಳ್ಳ ನಂತರ ರಾಮ ಗಿಡ್ಡ... ಹೀಗೆ.
ಹಿರಿಯವನಾದ ಬೆಳ್ಳ ಶಾಲೆಗೆ ಹೋದವನಲ್ಲ. ಸ್ವಲ್ಪ ಓಡಾಡಲು ಆಗುವಾಗಲೇ ಅಲ್ಲಿಯೇ ಹತ್ತಿರ ಇದ್ದ ಬ್ರಾಹ್ಮಣರ ಮನೆಯಲ್ಲಿ ಗಂಟಿ ಮೇಯಿಸುವ ಕೆಲಸ. ಮೈಮೇಲೆ ಸೊಂಟಕ್ಕೆ ಒಂದು ತುಂಡು ಪಂಚೆ ಬಿಟ್ಟರೆ ಬೇರೆ ಇಲ್ಲ. ಓದಲು ಅಲ್ಲಿಯೇ ಹತ್ತಿರ ಮುಧೂರಿ ದೇವಸ್ಥಾನದ ಪೌಳಿಯಲ್ಲಿ ಶಾಲೆ ಇದ್ದರೂ, ಅವನು ಶಾಲೆಗೆ ಹೋದವನಲ್ಲ. ಬದಲು ಅಪ್ಪನ ಜೊತೆಗೆ ಗದ್ದೆಗೆ ಇಳಿದು ಹೂಟಿಗೆ ಗುಡ್ಡಿಗೆ ಹೋಗಿ ಸೊಪ್ಪು ಸೌದೆ ತರಲು ಸಹಾಯಕ್ಕಾದಾನು. ಓದುವ ಅವಕಾಶ ಇದ್ದರೂ ಅವನ ಅಪ್ಪನ ಧೋರಣೆಯೇ ಬೇರೆ., ಬಡವರಾದ ನಮಗೆ ಓದೆಲ್ಲ ಯಾಕೆ? ಬೇರೆಯವರ ಮನೆಯ ಹಟ್ಟಿಗೆ ಸೊಪ್ಪು ತರುವ, ಅವರ ಗದ್ದೆಯ ಕೆಲಸ ಮಾಡಿ ದುಡಿಮೆ ಮಾಡುವ ನಮಗೆ, ಓದಿನಿಂದ ಹೊಟ್ಟೆ ತುಂಬತ್ತಾ? ದೇಹದಲ್ಲಿ ಕಸುವು ಇರುವವರೆಗೆ ದುಡಿಯುವುದಪ ಅಂತ. ಇರಲಿ.
ಒಮ್ಮೆ ಬೆಂಗಳೂರಿನ ನಮ್ಮ ಸಂಬಂಧಿಕರೊಬ್ಬರ ಹೋಟೇಲಿಗೆ ಕ್ಲೀನರ್ ಬೇಕಾಗಿತ್ತು. ಕ್ಲೀನರ್ ಕೆಲಸಕ್ಕೆ ಜನ ಸಿಗುತ್ತಿರಲಿಲ್ಲ. ಸಿಕ್ಕಿದರೂ ಹೆಚ್ಚು ಕಾಲ ಅವರು ನಿಲ್ಲುತ್ತಿರಲಿಲ್ಲ. ಯಜಮಾನರ ಜೋರಿಗೆ ಹೆದರಿಯೋ, ಆಗಲೇ ಪರಿಚಯವಾದ ಬೇರೆ ಹೊಟೇಲಿನಲ್ಲಿ ಒಂದು ರೂಪಾಯಿ ಹೆಚ್ಚು ಕೊಡುತ್ತಾರೆ ಅಂತಲೋ, ಬೆಂಗಳೂರಿನ ನೀರು ಕುಡಿದು ಜನ ಜೀವನ ಕಂಡು ತಲೆಕೆಟ್ಟೋ ಅಥವ ಸೊಕ್ಕಿಯೋ, ಏನೋ, ಅಂತೂ ಅಲ್ಲಿ ನಿಲ್ಲದೇ ಸ್ವಲ್ಪದಿನದಲ್ಲಿಯೇ ಹೇಳದೇ ಕೇಳದೇ ಹೋಗಿಬಿಡುತ್ತಿದ್ದರು. ಹಾಗಾಗಿ "ಊರಬದಿಯಲ್ಲಿ ಯಾರಾದರೂ ಶೂದ್ರ ಗಂಡುಗಳು ಇದ್ರೆ ಹೇಳಿ ಮರ್ರೆ ಒಳ್ಳೆ ಸಂಬಳವನ್ನೂ ಕೊಡುವ" ಎಂದು ಅಪ್ಪಯ್ಯ ಬೆಂಗಳೂರಿಗೆ ಆಟಕ್ಕೆ ಅಂತ ಹೋದಾಗ ಒಬ್ಬ ಹೋಟೇಲಿನ ಯಜಮಾನರು ಮಾತಾಡುತ್ತಾ ಹೇಳಿದರಂತೆ.
ಅಪ್ಪಯ್ಯ ಮನೆಗೆ ಬಂದಿದ್ದಾಗ ಈ ಪುರುಷ ಎಲ್ಲಿಗೋ ಹೋಗುವವನು ಸಂಜೆ ನಮ್ಮ ಮನೆಗೆ , "ಅಮ್ಮಾ ಒಂದು ವೀಳ್ಯ ಕೊಡಿ" ಎನ್ನುತ್ತಾ ಬಂದು ಮಾತಾಡುವಾಗ, ಅಮ್ಮ ಕೇಳಿದಳು "ಪುರುಷಾ, ನಿನ್ನ ಹೆರೀ ಗಂಡನ್ನು ಹೋಟೇಲಿಗೆ ಕಳಿಸುವ ಯೋಚನೆ ಇದ್ದರೆ ಹೇಳು. ನಾಲ್ಕು ರೂಪಾಯಿ ಸಂಪಾದನೆಯೂ ಆಗುತ್ತದೆ. ಬೆಂಗಳೂರಿನ ನಮ್ಮ ಪೈಕಿಯವರಿಗೊಂದು ಜನ ಬೇಕಿತ್ತಂತೆ" ಎಂದು ಅಪ್ಪಯ್ಯನಿಂದ ವಿಷಯ ತಿಳಿದು ಅಂದಳು. ಆಗ ಅಪ್ಪಯ್ಯನೂ "ಹೌದು ಮಾರಾಯಾ, ಕಳ್ಸುದಾದ್ರೆ ಹೇಳು" ಎಂದರು. ಅವನು " ಹಾಂ ಹೂಂ ಕಾಂಬೋ ಕೇಂಬೋ" ಆಂದ. ಮನೆಗೆ ಹೋಗಿ ಆ ಬೆಳ್ಳನ ಹತ್ರ ಕೇಳಿದಾಗ, ಅವನು ಕೂಡಲೇ ಒಪ್ಪಿಯೇ ಬಿಟ್ಟನಂತೆ. ಪುರುಷ ಮರುದಿನ ಬಂದು "ಗಂಡ್ ಬತ್ತತ್ತಂಬ್ರೆ" ಅಂದ. ಅಮ್ಮ ಆ ಗಂಡನ್ನು ಬರಲಿಕ್ಕೆ ಹೇಳಿ, ನನ್ನ ಅಣ್ಣಯ್ಯನದ್ದೇ ಎರಡು ಜೊತೆ ಹಳೆಯ ಅಂಗಿ ಚಡ್ಡಿಗಳನ್ನೂ ಕೊಟ್ಟು ಕಳಿಸಿದ್ದಾಯಿತು.
ನಂತರ ಬೆಂಗಳೂರಿಗೆ ಬಸ್ಸು ಹತ್ತಿಸಿ ಕಳಿಸಿ ಕೊಡುವ. ಅಲ್ಲಿ ಮೆಜೆಸ್ಟಿಕ್ಕಿಗೆ ಬಂದು ಕರೆದುಕೊಂಡು ಹೋದರಾಯಿತಲ್ಲ ಅಂತ ಯೋಚಿಸಿ, ಇಂತಾ ದಿನ ಬರುತ್ತಾನೆ ಎಂದು ಆ ಹೋಟೇಲಿನ ಯಜಮಾನರಿಗೆ ಪತ್ರ ಬರೆದು ತಿಳಿಸಿಯೂ ಆಯಿತು. ಬಸ್ಸಿನ ಹೆಸರು ಹುಡುಗನ ಹೆಸರೂ ಬರುವ ದಿನಾಂಕ ಎಲ್ಲವನ್ನೂ ತಿಳಿಸಿದರು
ಹೀಗೆ ಪುರುಷನ ಮಗ ಬೆಳ್ಳ ಕುಷಿಯಿಂದಲೇ ಬೆಂಗಳೂರು ಸೇರಿದ. ಸ್ವಲ್ಪ ದಿನ ಹೋಟೇಲು ಕೆಲಸವನ್ನೂ ಮಾಡಿದ. ಒಂದು ನಾಲ್ಕು ದಿನ ಕಳೆಯತ್ತಲೇ ಗಂಡಿಗೆ ಅಮ್ಮ ಅಪ್ಪನ ನೆನಪು ಕಾಡಲು ಶುರುವಾಯಿತು. ಮನೆಗೆ ಹೋಗುವ ಇಚ್ಚೆ ಜೋರಾಯಿತು. ಅಲ್ಲಿಯವರ ಹತ್ತಿರ ಹೇಳಿದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ದಿನ ಕಳೆದಂತೆ ಬೆಳ್ಳನಿಗೆ ಅಲ್ಲಿರಲು ಆಗಲೇ ಇಲ್ಲ ಎಂಬ ಸ್ಥಿತಿ ಬಂತು. ಕೊನೆಗೆ ಒಂದು ದಿನ ಊರಿಗೆ ಹೋಗುತ್ತೇನೆ ಅಂತ ಹೊರಟೆ ಬಿಟ್ಟ. ಅಲ್ಲಿಯವರಲ್ಲಿ ಹೇಳಲೂ ಇಲ್ಲ.
ಕೈಯಲ್ಲಿ ಬಿಡಿಗಾಸೂ ಇಲ್ಲ. ಒಂದು ಅಂದಾಜಿನ ಮೇಲೆ ನಡೆಯುತ್ತಾ ನಡೆಯಿತ್ತಾ ಬಹಳ ದೂರ ಬಂದುಬಿಟ್ಟ. ಆ ಊರು ಈ ಊರು ಹಾದು ಹೇಗೋ ಶಿವಮೊಗ್ಗಕ್ಕೆ ಬಂದುದಾಯಿತು. ಮತ್ತೆ ಕುಂದಾಪುರದ ಹೆಸರು ಹೇಳಿ ಅವರಿವರಲ್ಲಿ ವಿಚಾರಿಸಿಕೊಂಡು ಯಾರು ಯಾರನ್ನೋ ವಿಚಾರಿಸಿ ಘಟ್ಟವನ್ನೂ ಇಳಿದು ಒಂದು ಹತ್ತು ಹದಿನೈದು ದಿನದ ನಂತರ ಊಟ ತಿಂಡಿ ಇಲ್ಲದೇ ನಿತ್ರಾಣಿಯಾಗಿ ಮನೆ ತಲುಪಿದ ಅಂತ ಆಯಿತು.
ಅಲ್ಲಿ ಬೆಂಗಳೂರಿನಲ್ಲಿ ಇವನನ್ನು ಹುಡುಕಿದ್ದೇ ಹುಡುಕಿದ್ದು. ಕೊನೆಗೆ ಬೇರೆ ಹೋಟೇಲಿಗೆ ಹೋದನೋ ಏನೋ ಎಂದು ಅವರೂ ಸುಮ್ಮನಾದರು. ಕಣ್ಣು ಕಾಣದ ಆ ದೊಡ್ಡ ಊರಿನಲ್ಲಿ ಎಲ್ಲಿ ಅಂತ ಹುಡುಕಿಸಿಯಾರು?. ಮತ್ತೊಮ್ಮೆ ಅಪ್ಪಯ್ಯ ಬೆಂಗಳೂರಿಗೆ ಹೋದಾಗಲೇ ಗೊತ್ತಾದದ್ದು ಈ ಮಹಾರಾಯಾ ನಡೆದುಕೊಂಡೇ ಊರಿಗೆ ಬಂದಿದ್ದಾನೆ ಎಂದು. ಗಂಡಿನ ಸಾಹಸಕ್ಕೆಎಲ್ಲರೂ ತಲೆತೂಗಿದ್ದೇ "ಸಾಕು ಮಾರಾಯ ನಿನ್ನ ಸಾಹಸ. ದಾರಿ ತಪ್ಪಿಹೋಗಿ, ಬೇರೆ ಎಲ್ಲಿಯಾದರೂ ಹೋಗಿದ್ದರೆ ದೇವರೇ ಗತಿಯಾಗುತ್ತಿತ್ತು" ಎಂದರೆ ಅವನು ಸುಮ್ಮನೇ ನಗಾಡುತ್ತಿದ್ದ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ