ಸೋಮವಾರ, ನವೆಂಬರ್ 4, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ  ೧೯

ತಾನೊಟ್‌ನ ದೇವಾಲಯದಿಂದ ಹೊರಟ ನಾವು  ಮರುಭೂಮಿಯ ಮಧ್ಯದ ನಿರ್ಜನವಾದ ಮಾರ್ಗದಲ್ಲಿ ಬಂದು ಲಾಂಗೆ ವಾಲಾ ಯುದ್ಧ ನಡೆದ ಪ್ರದೇಶದಲ್ಲಿ ಇರುವ ಒಂದು ಅಪೂರ್ವವಾದ ಮ್ಯೂಸಿಯಂ ನ್ನು ನೋಡಲು ಬಂದೆವು . ಹೋಗುವ ದಾರಿಯಲ್ಲಿ ಅಲ್ಲಲ್ಲಿ ಬೃಹದಾಕಾರದ ಗಾಳಿಯಂತ್ರವನ್ನು ಅಳವಡಿಸಿದ್ದರು. ಬಹುಷ್ಯ ಆ ಪ್ರದೇಶದಲ್ಲಿ. ಪ್ರತೀ ಗಾಳಿ ಯಂತ್ರದ ಮೇಲೆ ನಮ್ಮ ದಕ್ಷಿಣಕನ್ನಡದ ಪಡುಬಿದ್ರೆ ಹತ್ತಿರದ ಸುಜಲಾನ್ ಕಂಪೆನಿಯ ಮುದ್ರೆ ಇದ್ದುದರಿಂದ ಒಮ್ಮೆ ನಮಗೆ ನಮ್ಮ ಊರಿನ, ಮನೆಯ ನೆನಪು ಬಂದದ್ದು ಸುಳ್ಳಲ್ಲ. 

ದಾರಿಯ ಮಧ್ಯದಲ್ಲಿ ಒಂದು ಕಡೆ ವಾಹನವನ್ನು ನಿಲ್ಲಿಸಿ, ನಾವು ಬೆಳಿಗ್ಗೆ ಕಟ್ಟಿಸಿಕೊಂಡು ಬಂದ ಚಪಾತಿ, ಪಲ್ಯ, ಬಾಳೆಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡೆವು. ಆಗ ರಾಜಸ್ಥಾನದ ಮರುಭೂಮಿಯ ನಿಜವಾದ ರಣಬಿಸಿಲಿನ ಅನುಭವ ನಮಗೆ ಆಯಿತು. ನಮ್ಮ ವಾಹನದಲ್ಲಿ ಏಸಿ ಇದ್ದುದರಿಂದ ಅದುವರೆಗೆ ನಮಗೆ ಗೊತ್ತಾಗಿರಲಿಲ್ಲ.

ನಾವು ಇಲ್ಲಿಗೆ ಬರುವ ಮೊದಲು ಲಾಂಗೆ ವಾಲಾ ಗಡಿಪ್ರದೇಶದ ದ್ವಾರವನ್ನು ಭೇಟಿಮಾಡಿ, ಲಾಂಗೆ ವಾಲಾ ವಸ್ತು ಸಂಗ್ರಹಾಲಯವನ್ನು ನೋಡಲು ಬಂದೆವು. ಅಲ್ಲಿ ಯುದ್ಧಕ್ಕೆ ಬಳಸುತ್ತಿದ್ದ ಅನೇಕ ಆಯುಧಗಳು ಹಿಂದಿನ ಆ ಹೋರಾಟದ ಕ್ಷಣಗಳನ್ನು ಕಲ್ಪಿಸಿಕೊಳ್ಳಲು ಸಹಾಯವಾಗುವ ದೃಶ್ಯಗಳು, ಭಾವ ಚಿತ್ರಗಳೂ ಇದ್ದವು. ನಂತರ ಅಲ್ಲಿಯೇ ನೆಲಮಾಳಿಗೆಯ ಏಸಿ ಹಾಲ್ ನಲ್ಲಿ ಲಾಂಗೆ ವಾಲಾ ಯುದ್ಧಕ್ಕೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಒಂದು ಡಾಕ್ಯುಮೆಂಟರಿಯನ್ನು ತೋರಿಸಿದರು. ಆಮೇಲೆ ಆ ಮ್ಯೂಸಿಯಂ ಎಡಭಾಗದ ಎತ್ತರ ಪ್ರದೇಶದಲ್ಲಿ ನಡೆದ ಯುದ್ಧದ ಸ್ಥಳವನ್ನೂ ನೋಡಿ ಬಂದೆವು.

ಲಾಂಗೆವಾಲಾದ ಮ್ಯೂಸಿಯಂ ನ ಬಲಭಾಗದಲ್ಲಿ ಒಂದು ದೊಡ್ಡ ಸ್ಮಾರಕವಿದೆ, ಅಲ್ಲಿ ಗಡಿಯ ಸ್ತಂಭ ಸಂಖ್ಯೆ 638 ಅನ್ನು ಇರಿಸಲಾಗಿದೆ, ಅದೇ ಸ್ಥಳದಲ್ಲಿ ಪಾಕಿಸ್ತಾನದ ಸೈನ್ಯವು  ಲಾಂಗೆ ವಾಲಾವನ್ನು ದಾಟಿದೆ. ಆದರೆ ವಾಸ್ತವವಾಗಿ, ಹೋರಾಟ ನಡೆದ ನಿಜವಾದ ಸ್ಥಳವು ಸ್ವಲ್ಪ ಮುಂದೆ ಇದೆ. ಅದು ಭಾರತ ಮತ್ತು ಪಾಕಿಸ್ತಾನದ ಗಡಿಗೆ ಹತ್ತಿರ ಹೋಗಲು ಅನುಮತಿಸದ ಸ್ಥಳದಲ್ಲಿ ಆಗಿದೆ. ಪ್ರವಾಸಿಗರಿಗೆ ನೋಡಲು ಅನುಕೂಲವಾಗಲೆಂದು ಮಾತ್ರ ಅದನ್ನು  ನಿರ್ಮಿಸಲಾಗಿದೆ.

ಯುದ್ಧದ ಪ್ರಕರಣದ ಒಂದು ನೋಟ ಈ ಕೆಳಗಿನಂತಿದೆ.

     ಕ್ರಿ.ಶ 1971 ರ ಸಂಜೆಯ 4 ರ ಸಮಯದಲ್ಲಿ, 2 ಎಲ್ಟಿ. ಧರಮ್ ವೀರ್ ಭನ್ ಅವರ ತುಕಡಿ, ಗಸ್ತು ತಿರುಗುತ್ತಿದ್ದಾಗ, ಗಡಿಯುದ್ದಕ್ಕೂ ವೈರಿ ಸೇನೆಯ ಶಬ್ದಗಳನ್ನು ಪತ್ತೆಹಚ್ಚಿತು, ಇದರಿಂದ ತಕ್ಷಣ ಎಚ್ಚರಗೊಂಡ ಅವರು ಹೆಚ್ಚಿನ ಸಂಖ್ಯೆಯ ಶಸ್ತ್ರಸಜ್ಜಿತ ವಾಹನಗಳನ್ನು ಸಮೀಪಿಸಲು ಸೂಚಿಸಿದರು. ಮೇಜರ್ ಆತ್ಮ ಸಿಂಗ್ ಹಾರಾಟ ನಡೆಸಿದ ಸೈನ್ಯದ ವಾಯು ವೀಕ್ಷಣೆ ಪೋಸ್ಟ್ ವಿಮಾನದಿಂದ - ಟ್ರ್ಯಾಕ್‌ನಲ್ಲಿ 20 ಕಿ.ಮೀ ಉದ್ದದ ಶಸ್ತ್ರಸಜ್ಜಿತ ಪ್ರದೇಶದಲ್ಲಿ, ಮುಂದುವರಿದ ಶಸ್ತ್ರಸಜ್ಜಿತ ಕಾಲಮ್ ಅನ್ನು, ಹಿಮ್ಮೆಟ್ಟಿಸಲು ಧರಮ್ ವೀರ್ ಭನ್ ಅವರ ಗಸ್ತು, ಚಂದಪುರಿ ಬೆಟಾಲಿಯನ್ ಪ್ರಧಾನ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ತುರ್ತು ಯುದ್ಧವಾಹನಗಳು ಮತ್ತು ರಕ್ಷಾಕವಚ ಮತ್ತು ಫಿರಂಗಿದಳದ ಬೆಂಬಲವನ್ನು ಕೋರಿದರು.

ಆದರೆ ಅವರಿಗೆ ಮೇಲಿನ ಅಧಿಕಾರಿಗಳಿಂದ ಕನಿಷ್ಠ ಆರು ಗಂಟೆಗಳವರೆಗೆ ಯುದ್ಧವಾಹನಗಳು ಲಭ್ಯವಿಲ್ಲದ ಕಾರಣ ಬೆಟಾಲಿಯನ್ ಅವರಿಗೆ ಉಳಿಯುವ ಇಲ್ಲವೇ ಹೋರಾಡುವ ಆಯ್ಕೆಯನ್ನು ನೀಡಿತು. ರಾತ್ರಿಯಲ್ಲಿ ಯುದ್ಧದಿಂದ ಹೆದರಿ ಹಿಂತೆಗೆದುಕೊಳ್ಳುವ ಬದಲು ತನ್ನ ಸೈನಿಕರು ಸಿದ್ಧಪಡಿಸಿದ ರಕ್ಷಣಾತ್ಮಕ ಕಾರ್ಯಗಳ ಲಾಭವನ್ನು ಹೊಂದಿದ್ದ ಅವರು, ಹುದ್ದೆಯ ರಕ್ಷಣಾತ್ಮಕ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಧರಿಸಿದರು.

ನಿರೀಕ್ಷಿಸಿದಂತೆ ಪಾಕಿಸ್ತಾನ ಪಡೆಗಳು ಮುಂಜಾನೆ 12:30 ಕ್ಕೆ ದಾಳಿ ಆರಂಭಿಸಿದವು. ಆಕ್ರಮಣವು ಏಕೈಕ ಹೊರಠಾಣೆ ಸಮೀಪಿಸುತ್ತಿದ್ದಂತೆ, ಪಾಕಿಸ್ತಾನದ ಫಿರಂಗಿದಳವು ಮಧ್ಯಮ ಫಿರಂಗಿ ಬಂದೂಕುಗಳಿಂದ ಗಡಿಯುದ್ದಕ್ಕೂ ದಾಳಿ ಮಾಡಿ ಹತ್ತು ಒಂಟೆಗಳಲ್ಲಿ ಐದು ಜನರನ್ನು ಕೊಂದಿತು. 45 ಟ್ಯಾಂಕ್‌ಗಳ ಕಾಲಮ್ ಪೋಸ್ಟ್‌ಗೆ ಸಮೀಪಿಸುತ್ತಿದ್ದಂತೆ, ಸಿದ್ಧಪಡಿಸಿದ ಮೈನ್ಫೀಲ್ಡ್ ಹಾಕಲು ಸಮಯವಿಲ್ಲದ ಭಾರತೀಯ ರಕ್ಷಣಾ ಕಾರ್ಯಗಳು, ಶತ್ರುಗಳು ಮುಂದುವರೆದಂತೆ ಆತುರದ ಟ್ಯಾಂಕ್ ವಿರೋಧಿ ಮೈನ್ಫೀಲ್ಡ್ ಅನ್ನು ಹಾಕಿದರು, ಈ ಪ್ರಕ್ರಿಯೆಯಲ್ಲಿ ಕಾಲಾಳು ಪಡೆಯ ಒಬ್ಬರು ಕೊಲ್ಲಲ್ಪಟ್ಟರು.

………...ಮುಂದುವರಿಯುವುದು.

ಫೋಟೋ ಗಳಿಗಾಗಿ ಕೆಳಗಿನ ಲಿಂಕ್ ನೋಡಿ

https://drive.google.com/folderview?id=1R-6Hso4YL89LQTNLC1uCIYuhqKwC17hx

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ