ಗುರುವಾರ, ನವೆಂಬರ್ 7, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೨೨

ಆ ಅಪರೂಪದ ಮ್ಯೂಸಿಯಂ ಮತ್ತು ಡಾಕ್ಯುಮೆಂಟರಿಗಳನ್ನು ನೋಡಿದ ನಾವು, ಅಲ್ಲಿಂದ ನಮ್ಮ ಪ್ರಯಾಣವನ್ನು ಮುಂದುವರಿಸಿದೆವು. ಆ ದಿನ ರಾತ್ರಿ ಜೈಸಲ್ಮೇರನ್ನು ತಲುಪಿ, ಅಲ್ಲಿಯ ನಗರದ ಕೋಟೆಯ ಪಕ್ಕದಲ್ಲಿಯೇ ಇರುವ ಗ್ರೇಸ್ ಇನ್ ಎನ್ನುವ ಲಾಡ್ಜಿಂಗ್ ನಲ್ಲಿ ಉಳಿದುಕೊಂಡೆವು. ಅಲ್ಲಿಯೂ ಕೂಡ ನಮಗೆ ಬೇಕಾದ ಹಾಗೆ ಅಡುಗೆ ಮಾಡಿಕೊಡುವ ವ್ಯವಸ್ಥೆ ಇದ್ದುದರಿಂದ ನಮಗೆ ತುಂಬಾ ಅನುಕೂಲವಾಯಿತು. ರಾತ್ರಿ ಊಟವನ್ನು ಮಾಡಿ ನಮನಮಗೆ ಮೀಸಲಾಗಿದ್ದ ರೂಮಿನಲ್ಲಿ ಮಲಗಿದೆವು.

ದಿನಾಂಕ 5.10.19

ಬೆಳಿಗ್ಗೆ ಎದ್ದ ನಾವು ನಿತ್ಯವಿಧಿಗಳನ್ನು ಮುಗಿಸಿ, ತಿಂಡಿ ತಿಂದು ಅಲ್ಲಿಯೇ ಹತ್ತಿರವಿರುವ ಜೈ ಸಲ್ಮೇರ್ ನಗರದ ಕೋಟೆಯನ್ನು ನೋಡಲು ಹೋದೆವು. ಪ್ರತೀ ಕಡೆಯಂತೆ ಇಲ್ಲೂ ನಾವು ಗೈಡ್ ನ್ನು ಗೊತ್ತುಮಾಡಿಕೊಂಡಿದ್ದೆವು.

ಅದೊಂದು ಸುಂದರವಾದ ಕೋಟೆ ಮತ್ತು ಅರಮನೆಗಳ ಸಮೂಹವಲ್ಲದೇ ಈಗಲೂ ಅಲ್ಲಿ ಸುಮಾರು ನಾಲ್ಕೈದು ಸಾವಿರ ಬ್ರಾಹ್ಮಣ ಕುಟುಂಬಗಳು ವಾಸಿಸುತ್ತಿರುವುದು ಕಂಡುಬಂತು. ಕೋಟೆಯ ಒಳಗೆ ಕುಸುರಿ ಕೆಲಸಗಳುಳ್ಳ ಗೋಡೆಗಳ ಅರಮನೆಗಳು ಪ್ರಾಂಗಣಗಳು ಇದ್ದು, ಅನೇಕ ವ್ಯಾಪಾರಿ ಮಳಿಗೆಗಳೂ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದವು.
ಆ ಕೋಟೆಯ ಬಗ್ಗೆ ಗೂಗಲ್ ಕೆಳಗಿನ ವಿವರಗಳನ್ನು ತಿಳಿಸಿತು.

ಹಳೆಯ ನಗರದ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗವು ಇನ್ನೂ ಕೋಟೆಯೊಳಗೆ ವಾಸಿಸುತ್ತಿರುವುದರಿಂದ ಇದು ವಿಶ್ವದ ಕೆಲವೇ "ಜೀವಂತ ಕೋಟೆಗಳಲ್ಲಿ" ಒಂದಾಗಿದೆ. ಅದರ 800 ವರ್ಷಗಳ ಇತಿಹಾಸದ ನೆನಪಿಗಾಕಿ ಈ ಕೋಟೆಯ ಸ್ಥಳವು ಹಿಂದೆ ಜೈಸಲ್ಮೇರ್ ನಗರವಾಗಿತ್ತು. ಹೆಚ್ಚುತ್ತಿರುವ ಜೈಸಲ್ಮೇರ್ ಜನಸಂಖ್ಯೆಗೆ ಅನುಗುಣವಾಗಿ ಕೋಟೆಯ ಗೋಡೆಗಳ ಹೊರಗಿನ ವಿಸ್ತಾರಗಳು, ಸುಮಾರು 17 ನೇ ಶತಮಾನದಲ್ಲಿ ಬಂದಿವೆ ಎಂದು ಹೇಳಲಾಗುತ್ತದೆ.

ಜೈಸಲ್ಮೇರ್ ಕೋಟೆ ರಾಜಸ್ಥಾನದ ಎರಡನೇ ಅತ್ಯಂತ ಹಳೆಯ ಕೋಟೆಯಾಗಿದ್ದು, ಇದನ್ನು ಕ್ರಿ.ಶ 1156 ರಲ್ಲಿ ರಜಪೂತ್ ರಾವಲ್ (ಆಡಳಿತಗಾರ) ಜೈಸಲ್ ಎಂಬವರು ನಿರ್ಮಿಸಿದ್ದು , ಇವರಿಂದ ಕೋಟೆಗೆ ಆ ಹೆಸರು ಬಂದಿದೆ,

ಕೋಟೆಯ ಬೃಹತ್ ಹಳದಿ ಮರಳುಗಲ್ಲಿನ ಗೋಡೆಗಳು ಹಗಲಿನಲ್ಲಿ ಸಿಂಹದ ಬಣ್ಣವಾಗಿದ್ದು, ಸೂರ್ಯ ಮುಳುಗುತ್ತಿದ್ದಂತೆ ಜೇನು-ಚಿನ್ನದ ಬಣ್ಣದ ಹಾಗೆ ಮಸುಕಾಗುತ್ತದೆ, ಇದರಿಂದಾಗಿ ಹಳದಿಯಾದ ಮರುಭೂಮಿಯು ಇದೇ ಬಣ್ಣವಾದ್ದರಿಂದ ಕೋಟೆಯನ್ನು ಮರೆಮಾಡುತ್ತದೆ. ಈ ಕಾರಣಕ್ಕಾಗಿ ಇದನ್ನು ಸೋನಾರ್ ಕ್ವಿಲಾ ಅಥವಾ ಗೋಲ್ಡನ್ ಫೋರ್ಟ್ ಎಂದೂ ಈ ಕೋಟೆಯನ್ನು ಕರೆಯುತ್ತಾರೆ. ಥಾರ್ ಮರುಭೂಮಿಯ ತ್ರಿಕುಟಾ ಎಂಬ ದೊಡ್ಡ ಬೆಟ್ಟದ ಮರಳಿನ ವಿಸ್ತಾರದ ಮಧ್ಯೆ ಈ ಕೋಟೆ ನಿಂತಿದೆ.

ಕೋಟೆಯ ಇತಿಹಾಸದ ಬಗ್ಗೆ ಹೇಳುವುದಾದರೆ,

ಕ್ರಿ.ಶ. 1293-94ರ ಸುಮಾರಿಗೆ, ರಾವಲ್ ಜೆತ್ಸಿ ದೆಹಲಿಯ ಸುಲ್ತಾನ್ ಅಲಾವುದ್ದೀನ್ ಖಲ್ಜಿ ಅವರು, ಎಂಟರಿಂದ ಒಂಬತ್ತು ವರ್ಷಗಳವರೆಗೆ ಈ ಕೋಟೆಗೆ ಮುತ್ತಿಗೆಯನ್ನು ಹಾಕಿದರು.

ಮುತ್ತಿಗೆಯ ಅಂತ್ಯದ ವೇಳೆಗೆ, ಕೋಟೆಯು ವೈರಿಗಳ ವಶವಾದುದರಿಂದ ಭತಿ ರಜಪೂತ ಮಹಿಳೆಯರು ' ಜೌಹರ್ ' (ಆತ್ಮಾಹುತಿ) ಮಾಡಿಕೊಂಡರು, ಮತ್ತು ಪುರುಷ ಯೋಧರು ಸುಲ್ತಾನರ ಪಡೆಗಳೊಂದಿಗಿನ ಯುದ್ಧದಲ್ಲಿ ಹೋರಾಡಿ ತಮ್ಮ ಅಂತ್ಯವನ್ನು ಕಂಡರು. ಮುತ್ತಿಗೆಯ ನಂತರ, ಕೋಟೆಯನ್ನು ಗೆದ್ದರೂ, ಕೆಲವು ವರ್ಷಗಳವರೆಗೆ, ಕೋಟೆಯಲ್ಲಿ ಯಾರೂ ಇರಲಿಲ್ಲ, ಅಂತಿಮವಾಗಿ ಉಳಿದಿರುವ ಭಟಿಯರು ಮತ್ತೆ ಅದನ್ನು ಆಕ್ರಮಿಸಿಕೊಂಡರು.

1530 - 1551 ರ ಸುಮಾರಿಗೆ ರಾವಲ್ ಲುನಕರನ್ ಆಳ್ವಿಕೆಯಲ್ಲಿ, ಕೋಟೆಯನ್ನು ಅಫಘಾನ್ ಮುಖ್ಯಸ್ಥ ಅಮೀರ್ ಅಲಿ ಆಕ್ರಮಣ ಮಾಡಿದರು. ರಾವಲ್ ಅವರು ಯುದ್ಧದಲ್ಲಿ ಹೋರಾಡುತ್ತಿದ್ದಾರೆಂದು ತೋರಿದಾಗ, ಜೌಹರ್ ವ್ಯವಸ್ಥೆ ಮಾಡಲು ಸಾಕಷ್ಟು ಸಮಯವಿಲ್ಲದ ಕಾರಣ ಅವರು ಇಲ್ಲಿಯ ಮಹಿಳಾ ಜನರನ್ನು  ಅಮಾನುಷವಾಗಿ ಕೊಂದರು.

ದುರಂತವೆಂದರೆ, ಆ ದುರಂತ ಕಾಂಡ ಮುಗಿದ ಕೂಡಲೇ ದೊಡ್ಡ ಸೈನ್ಯವು ರಕ್ಷಣೆಗೆ ಬಂತು ಮತ್ತು ಕೋಟೆಯ ರಕ್ಷಣೆಯಲ್ಲಿ ಜೈಸಲ್ಮೇರ್ ಸೈನ್ಯವು ವಿಜಯಶಾಲಿಯಾಯಿತು.
ಕ್ರಿ.ಶ. 1541 ರಲ್ಲಿ, ರಾವಲ್ ಲುನಕರನ್ ಅವರು ಕೋಟೆಯ ಮೇಲೆ ದಾಳಿ ಮಾಡಿದ ಮೊಘಲ್ ಚಕ್ರವರ್ತಿ ಹುಮಾಯೂನ್ ವಿರುದ್ಧ ಹೋರಾಡಿದರು,

ಮುಂದೆ ಹೋರಾಟಕ್ಕೆ ಸೈನ್ಯದೊಡನೆ ಬಂದ ಅಕ್ಬರ್‌ನನ್ನು ಗೆಲ್ಲಲಾಗದೇ,  ಅವನು ತನ್ನ ಮಗಳನ್ನು ಅರ್ಪಿಸಿದನು. ಮೊಘಲರು 1762 ರವರೆಗೆ ಕೋಟೆಯನ್ನು ನಿಯಂತ್ರಿಸಿದರು.

………..ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ